Posts

Showing posts from November, 2017

ಬಂಡೆಗಳ ಬಸಿರಿನಲ್ಲಿ ಹಸಿರು ಹಂಪೆ

Image
ಬಂಡೆಗಳ ಬಸಿರಿನಲ್ಲಿ ಹಸಿರು ಹಂಪೆ ಹಂಪೆ ಮತ್ತು ಕಮಲಾಪುರದ ನಡುವೆ ನಮ್ಮ ಹಳ್ಳಿ ಮಾದಲಾಪುರ."ಊಟದ ಕಾಲುವೆ " ನಮ್ಮ ಹಳ್ಳಿಯನ್ನು ಸುತ್ತಿಕೊಂಡು ಹೋಗುತ್ತದೆ. ಈ ಕಾಲುವೆಗೆ ಇಂತಹ ವಿಚಿತ್ರವಾದ ಹೆಸರು ಏಕೆ ಬಂತು ಎಂದು ತುಂಬಾ ಜನರು ಕೇಳುತ್ತಲೇ ಇರುತ್ತಾರೆ. ಮಹಾನವಮಿ ದಿಬ್ಬವನ್ನು ಕಟ್ಟುವಾಗ ಅದರಲ್ಲಿ ಬಳಸಲಾದ ಹಸಿರು ಬಣ್ಣದ ಬೆಣಚುಕಲ್ಲಿನ ಚಪ್ಪಡಿಗಳನ್ನು ಈ ಕಾಲುವೆಯ ಇಬ್ಬದಿಗಳಲ್ಲೂ ಹಾಸಲಾಗಿದೆ. ಈ ಕಲ್ಲು ಚಪ್ಪಡಿಗಳ ಮಧ್ಯ ಬಾಳೆಎಲೆಯ ಆಕಾರದಲ್ಲಿ ತಗ್ಗಾಗಿ ಕೆತ್ತನೆ ಮಾಡಿ, ಸುತ್ತಲೂ ಐದಾರು ಬಟ್ಟಲುಗಳ ಆಕಾರದ ಗುಂಡಿಗಳಿವೆ. ದಸರಾ ದಿಬ್ಬವನ್ನು ಕಟ್ಟುವ ನೂರಾರು ಕೆಲಸಗಾರರು ಮಧ್ಯಾಹ್ನದ ಊಟಕ್ಕೆಂದು ಮಾಡಿಕೊಂಡ ವ್ಯವಸ್ಥೆಯಂತೆ. ಇದರ ಪಕ್ಕದಲ್ಲಿ ನಮ್ಮ ಹೊಲವಿದ್ದುದರಿಂದ ಆಗಾಗ ನಾವೂ ಸಹ ಇದರ ಮೇಲೆ ಬಾಳೆಎಲೆ ಹಾಸಿಕೊಂಡು ವನಭೋಜನದ ಆನಂದವನ್ನು ಅನುಭವಿಸುತ್ತಿದ್ದೆವು. ನಮ್ಮದು ಮೂವತ್ತಾರು ಜನಗಳಿರುವ ಅವಿಭಾಜ್ಯ ರೈತ  ಕುಟುಂಬ. ನಮ್ಮ ಮುತ್ತಜ್ಜ ಲಕುಮಜ್ಜನಿಗೆ ಬುಕ್ಕಮ್ಮಾಜಿಯವರು ಇಪ್ಪತ್ತು ಎಕರೆ ಹೊಲವನ್ನು ಕಮಲಾಪುರದ ಕೆರೆಕಟ್ಟಲು ಧನಸಹಾಯ ಮಾಡಿದ್ದಕ್ಕೆ ಬಳುವಳಿಯಾಗಿ ಕೊಟ್ಟಿದ್ದರು. ಆ ಹೊಲ ಈ ಊಟದ ಕಾಲುವೆಯ ಪಕ್ಕದಲ್ಲೇ ಇತ್ತು. ಒಳ್ಳೆಯ ಫಲವತ್ತಾದ ನೀರಾವರಿ ಜಮೀನು. ಕಾಲುವೆಯ, ನದಿಯ ಅಥವಾ ಕೆರೆಗಳ ನೀರಿನ ಆಸರೆ ಇರುವ ಹೊಲಗಳನ್ನು ನಮ್ಮಕಡೆ "ನದಿ ಮಾತೃಕೆ" ಅಂತಾ ಕರೆಯುತ್ತಾರೆ. ಬರೀ ಮಳೆಯನ್ನೇ ನಂಬ...