Posts

Showing posts from November, 2018

ಗೂಢಾಚಾರಿಕೆಯಿಂದ ಮುಕ್ತಿ ಯಾತ್ರೆಗೆ

Image
Gerusoppe                  ಕೃಷ್ಣದೇವರಾಯರು ತಮ್ಮ ಪರಿವಾರ ಮತ್ತು ಆಪ್ತರೊಂದಿಗೆ ಶರಾವತಿ ನದಿಯಲ್ಲಿ ದೋಣಿ ವಿಹಾರ, ಜಲಪಾತದ ವೀಕ್ಷಣೆ ಮತ್ತು ಬಸದಿಗಳಲ್ಲಿ ಪೂಜೆಗಳನ್ನೆಲ್ಲಾ ಮುಗಿಸಿ ವಿಷೇಶ ಅಥಿತಿಗೃಹಕ್ಕೆ ಮರಳುವಷ್ಟರಲ್ಲಿ ಗೇರುಸೊಪ್ಪದ ಮಂತ್ರಿಗಳಾಗಲೇ ರಾಯರು ಭೇಟಿ ಮಾಡುವವರ  ಪಟ್ಟಿಯನ್ನು ಸಿದ್ದಪಡಿಸಿದ್ದರು. ಕೆಳದಿಯ ಚೌಡಪ್ಪನಾಯಕ ತಮ್ಮ ಪುತ್ರ ಸದಾಶಿವನಾಯಕರೊಂದಿಗೆ ಬಂದಿದ್ದರು. ನಾನು ಸಂಗ್ರಹಿಸಿದ ಮಾಹಿತಿಯಲ್ಲಿ ಇವರ ವಿಷಯವೂ ತುಂಬಾ ಇತ್ತು. ಇವರಿಗೆ 'ನೀವು ಸದ್ಯಕ್ಕೆ ಗೇರುಸೊಪ್ಪದ ಕಡೆ ಕಣ್ಣುಹಾಯಿಸಬೇಡಿ' ಎಂದು ಬುದ್ದಿ ಹೇಳಬಹುದು ರಾಯರು. ಬಾರ್ಕೂರಿನಿಂದ ತುಳುನಾಡಿನ ರಾಜ್ಯಪಾಲ ವಿಠರಸ ಒಡೆಯರೂ ಬಂದಿದ್ದರು. ಇವರು ಕೃಷ್ಣದೇವರಾಯರು ಮತ್ತು ಅವರ ಆಪ್ತರನ್ನು ತಮ್ಮ ನಾಡಿಗೆ ಕರೆದೊಯ್ಯಲು ಬಂದಿದ್ದು ಮೇಲುತೋರಿಕೆಯಷ್ಟೆ ಆದರೆ ಅಸಲಿಗೆ ವಿಷಯ ಸ್ವಲ್ಪ ಗಂಭೀರವೇ. ಪೋರ್ಚುಗೀಸರು ಆಗಲೇ ಬಾರ್ಕೂರಿನ ಮೇಲೂ ಕಣ್ಣು ಹಾಯಿಸಿದ್ದರು. ಅಲ್ಲಿಯ ಬಂದರನ್ನು ಉಪಯೋಗಿಸಿ ಕೊಳ್ಳಲು ಅನುಮತಿ ಕೇಳಿದ್ದರಂತೆ. ಅರಸರು ಅದನ್ನು ನಿರಾಕರಿಸಿದಾಗ ಬಂದರನ್ನು ಸುಟ್ಟುಹಾಕುತ್ತೇವೆ ಎಂದು ಹೆದರಿಸಿದರಂತೆ. ಓಹೋ ಈಗ ಅರಿವಾಯಿತು ಕ್ರಿಸ್ಟೊವೋ ಫಿಗ್ರಾಡೋ ಅವರ ಜೊತೆ ಬಂದಿರುವ ಪೋರ್ಚುಗೀಸು ಅಧಿಕಾರಿಗಳು ಯಾರೆಂದು. ಇವರು ಪೋರ್ಚುಗೀಸರ ಕಡೆಯಿಂದ ಸಂಧಾನಕ್ಕೆ ಬಂದ ಅಧಿಕಾರಿಗಳ...