Posts

Showing posts from March, 2018

ನಾಟ್ಯರಾಣಿ ಚಿನ್ನಮ್ಮದೇವಿ

Image
ನಾಟ್ಯರಾಣಿ ಚಿನ್ನಮ್ಮದೇವಿ ನಾನು ಮತ್ತು ಚಿನ್ನಮ್ಮದೇವಿಯವರು... ಒಂದೇ ನಾಟ್ಯಗುರುಗಳ ಅಚ್ಚುಮೆಚ್ಚಿನ ಶಿಷ್ಯೆಯರು. ವಿಜಯನಗರದಲ್ಲಿಯೇ ಅತ್ಯಂತ ಪ್ರಸಿಧ್ಧಿಯಾದಂತ ಗುರುಗಳವರು, ನಾಟ್ಯಕಲಾ ಪ್ರವೀಣರು. ಆದರೆ ಬಹಳ ಶಿಸ್ತು, ಕೆಲವೊಮ್ಮೆ ತುಂಬಾ ಕಠೋರ ಎನಿಸುವಷ್ಟರಮಟ್ಟಿಗೆ ನಮ್ಮನ್ನು ನಡೆಸಿಕೊಳ್ಳುತ್ತಿದ್ದರು. ಬರಿಗಾಲಲ್ಲಿ, ವಿಜಯನಗರದ ಉರಿ ಬಿಸಿಲಿಲ್ಲಿ, ಸುಡುತ್ತಿರುವ ಬಂಡೆಯ ಮೇಲೆ ನಮ್ಮ ತಾಲೀಮು! ಆದರೆ ಚಿನ್ನಮ್ಮನಂತಹ ನಾಟ್ಯಪ್ರಿಯರಿಗೆ ಇದಾವುದರ ಲೆಕ್ಕವೇ ಇಲ್ಲ... ಮೈಮರತು ನರ್ತಿಸುತ್ತಿದ್ದಳು. ನಮ್ಮ ಅಚ್ಚುಮೆಚ್ಚಿನ ಸಮಯವೆಂದರೆ ಬೆಳದಿಂಗಳ ಸಮಯದಲ್ಲಿ ನಡೆಯುತ್ತಿದ್ದ ತರಬೇತಿ.    ಒಮ್ಮೆ ಬೆಳದಿಂಗಳ ಬೆಳಕಿನಲ್ಲಿ ನಮ್ಮ ನರ್ತನದ ಅಭ್ಯಾಸ ನಡೆಯುತ್ತಿರುವಾಗಲೇ ಅನತಿದೂರದಲ್ಲಿ ಬಂಡೆಯ ಮೇಲೆ ಕುಳಿತ ವ್ಯಕ್ತಿಯೊಬ್ಬರು ಚಿನ್ನಮ್ಮನ  ನೃತ್ಯವನ್ನು ಮಂತ್ರ ಮುಗ್ಧರಾಗಿ ನೋಡುತ್ತ ಕುಳಿತಿದ್ದರು. ನಮ್ಮ ಆಭ್ಯಾಸ ಮುಗಿದರೂ ಸಹ ಅಲ್ಲಿಂದ ಕದಲುವ ಲಕ್ಷಣಗಳೇ ಕಾಣಲಿಲ್ಲ. ಬೆಳದಿಂಗಳ ಮಂದ ಬೆಳಕಿನಲ್ಲಿಯೂ ಅವರ ಆಕರ್ಷಕ ವ್ಯಕ್ತಿತ್ವ ಎದ್ದು ಕಾಣುತ್ತಿತ್ತು. ನಮ್ಮ ಗೆಜ್ಜೆ, ದಿರಿಸುಗಳನ್ನು ಎತ್ತಿಕೊಂಡು ಅವರ ಮುಂದೇ ಹಾದು ಹೋದೆವು. ಹತ್ತಿರದಿಂದ ನೋಡುತ್ತಲೇ ಎಲ್ಲೋ ನೋಡಿದ ನೆನಪು , ಆದರೆ ನಿರ್ದಿಷ್ಟವಾಗಿ ಯಾರೆಂದು ನನಗಾಗಲೀ, ಚಿನ್ನಮ್ಮನಿಗಾಗಲೀ ತಿಳಿಯಲಿಲ್ಲ. ಹುಣ್ಣಿಮೆಯಾದ ಮೂರು ನಾಲ್ಕು ರಾತ್ರಿಗಳ ನಂತರ ನಮ್ಮ ರಾತ್ರ...

ಯೋಧನ ಯಶೋಗಾಥೆ

Image
 ಅವತ್ತು ಕೃಷ್ಣಜನ್ಮಾಷ್ಟಮಿ. ಆ ದಿನ ಇನ್ನೊಬ್ಬ ಕೃಷ್ಣರಿಗೂ,  ವಿಜಯನಗರ ಸಾಮ್ರಾಜ್ಯಕ್ಕೂ ವಿಶೇಷ ದಿನ. ಅಂದು  ಶ್ರೀ ಕೃಷ್ಣದೇವರಾಯರ ಪಟ್ಟಾಭಿಷೇಕ.! ಆಗ ನನಗಿನ್ನೂ ಇಪ್ಪತ್ತೊಂದು ವರ್ಷ. ಸೈನ್ಯಕ್ಕೆ ಸೇರಿ ಒಂದೂವರೆ ವರ್ಷವಷ್ಟೇ ಆಗಿತ್ತು.  ಕೃಷ್ಣದೇವರಾಯರಂತೆ ನಾವೂ ಸಹಾ ತುಳುವ ವಂಶಸ್ಥರು, ಇವರ ತಂದೆ ತುಳುವ ನರಸನಾಯಕರ ಸೈನ್ಯದಲ್ಲಿ ನನ್ನ ತಂದೆಯವರು ಸೈನಿಕರಾಗಿದ್ದರು. ಯುವರಾಜರ ಜೊತೆಗೆ ಯುಧ್ಧಮಾಡುತ್ತಿದ್ದಾಗ ಗಾಯಗೊಂಡರು, ಒಂದು ಕಾಲು ಕಳೆದುಕೊಂಡುಬಿಟ್ಟರು. ಯುಧ್ಧಭೂಮಿಯಿಂದ ಕೃಷ್ಣದೇವರಾಯರೇ ಅವರನ್ನು ರಕ್ಷಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬಂದರಂತೆ. ಅವರ ಆರೋಗ್ಯ ಚೇತರಿಸಿಕೊಂಡ ನಂತರ ಅವರನ್ನು ಸೈನ್ಯದಲ್ಲಿ ಲೆಕ್ಕಿಗನಾಗಿ ಉಳಿಸಿಕೊಂಡರು. ಒಂದು ದಿನ ನಮ್ಮ ತಂದೆಯವರು ನನ್ನನ್ನು ಕರೆದು ‘ವಿರುಪಾಕ್ಷಾ..ಕೃಷ್ಣದೇವರಾಯರ ಋಣ ತೀರಿಸಲಿಕ್ಕಿದೆ..ನೀನೂ  ಸೈನ್ಯಕ್ಕೆ ಸೇರಿಕೊಂಡು ಈ ಸಾಮ್ರಾಜ್ಯದ ಸೇವೆ ಮಾಡು’ ಎಂದರು. ಕೆಲವೇ ದಿನಗಳಲ್ಲಿ ನಮ್ಮ ತಂದೆಯ ಆದೇಶದಂತೆ ನಾನೂ ಸೈನ್ಯಕ್ಕೆ ಸೇರಿಕೊಂಡೆ.    ಸೈನ್ಯದಲ್ಲಿ ತರಬೇತಿಯ ಕ್ರಮವನ್ನು ಕೃಷ್ಣದೇವರೆ ಖುದ್ದಾಗಿ ನಿರ್ಮಿಸಿದ್ದಂತೆ. ಅವರು ಪಾಲಿಸುತ್ತಿದ್ದ ದಿನಚರಿಯನ್ನೇ ಸೈನ್ಯದ ನಾವೆಲ್ಲಾ ಅನುಸರಿಸುತ್ತಿದ್ದೆವು.  ಸೂರ್ಯೋದಯಕ್ಕೆ ಮುಂಚೆ ನಾವೆಲ್ಲರೂ ಮೈದಾನದಲ್ಲಿ ಸೇರುತ್ತಿದ್ದೆವು. ಮೂರು ಮೈಲಿಗಳ ಓಟದ...

ದೂರದಿಂದ ಬಂದವರು

Image
ನಾವಿಲ್ಲಿಗೆ ಬಂದ ಹೊಸತರಲ್ಲಿ ನಮ್ಮನ್ನು ಹಾಗೇ ಕರೆಯುತ್ತಿದ್ದವರು...ದೂರದಿಂದ ಬಂದವರು. ತೀರ್ಥಹಳ್ಳಿಯ ಸಮೀಪದ ಕ್ಷೇಮಾಪುರದಿಂದ ವಿಜಯನಗರಕ್ಕೆ ಕಾಲುನಡಿಗೆಯಿಂದ ಬಂದವರಿಗೆ... ದೂರವೇ ‘ಸರಸ್ವತೀ..ಹೊರಡು ವಿಜಯನಗರಕ್ಕೆ ಹೋಗೋಣ, ಅಲ್ಲಿ ಸಂಗೀತದ ಮೂಲಕ ಶ್ರೀಹರಿಯ ಸೇವೆ ಮಾಡೋಣ ಎಂದಾಗ, ಸಂತೋಷದಿಂದ ನಾನೂ ಮಕ್ಕಳೊಂದಿಗೆ ಹೊರಟೇಬಿಟ್ಟೆ. ಇವರು ಶ್ರೀನಿವಾಸ ನಾಯಕರಾಗಿದ್ದಾಗ, ವಜ್ರದ ವ್ಯಾಪಾರಕ್ಕೆ ಬರುತ್ತಿದ್ದಾಗ ವಿಜಯನಗರದಲ್ಲಿ ಇವರ ಸಿರಿತನಕ್ಕೆ ತಕ್ಕಂತೆ ರಾಜಮರ್ಯಾದೆ ಸಿಗುತ್ತಿತ್ತಂತೆ. ಇವರು ನವಕೋಟಿ ನಾರಾಯಣರಾಗಿದ್ದುದೂ ಇಲ್ಲಿಂದಲೇ ತಾನೇ.       ಕೃಷ್ಣದೇವರಾಯರ ಪಟ್ಟಾಭಿಷೇಕ ನಡೆದಾಗ ರಾಜ್ಯದ ಪರಿಸ್ಥಿತಿ ಇನ್ನೂ ಅತಂತ್ರದಲ್ಲಿತ್ತಂತೆ. ಒಳದಂಗೆ, ಉತ್ತರಕ್ಕೆ ಬಹಮನಿ ಮುಸ್ಲೀಮರ ಕಾಟ, ಖಾಲಿಯಾದ ಖಜಾನೆ, ಸಂಬಳವಿಲ್ಲದೆ ಅಧೀರರಾಗಿದ್ದ ಸೈನಿಕರು. ಪಟ್ಟಾಭಿಷೇಕ ಮಾಡಲೇ ಬೇಕಾದ ಅನಿವಾರ್ಯತೆ..ಹೊಂಚುಹಾಕುತ್ತಿದ್ದ   ಶತ್ರುಗಳಿಂದ ರಾಜ್ಯವನ್ನು ಉಳಿಸಿಕೊಳ್ಳಲು….ಎಂದೆಲ್ಲಾ ವಿಜಯನಗರದ ಪರಿಸ್ಥಿತಿಯನ್ನು ವಿವರಿಸುತ್ತಲೇ ಬಂದರು ಹಾದಿ ಉದ್ದಕ್ಕೂ.        ಕೃಷ್ಣದೇವರ ಹೆಸರು ಹೇಳುತ್ತಲೇ ಇವರಿಗೆ ಎಲ್ಲಿಲ್ಲದ ಉತ್ಸಾಹ..       'ಸರಸ್ವತಿ.. ಅಂತಹ ಎದೆಗಾರನನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ' ಎಂದು ಅವರ ...

ಮಾತುಂಗದ ಮಾತಂಗಿ

Image
                ನಾನು ಹುಟ್ಟಿದ್ದು ಹಂಪಿ ಹತ್ರ ಮಾತುಂಗ ಬೆಟ್ಟದ ತಪ್ಪಲಿನ್ಯಾಗ ಹಳ್ಳಿ, ಆದ್ರ ನನಿಗೆ ಮಾತಂಗಿ ಅಂತಾ ಹೆಸರಿಟ್ಟಿದ್ದು ಸವದತ್ತಿಯ ಗುರುಗಳು. ಮಾತಂಗಿ, ಸರಸ್ವತಿಯ ಒಂದು ಅವತಾರಂತೆ. ನೋಡಕೆ ಭಯಂಕರವಾದ ರೂಪದಾಗೆ ಕಾಣಿಸಿಕೊಂಡರೂ ಸರಸ್ವತಿಯ ಮೂಲಗುಣ,ವಿದ್ಯೆ, ಕಲೆ ಇದರ ಜೊತಿಗೆ, ಸಾಹಸ, ಪರಾಕ್ರಮದ ಅವತಾರವೆತ್ತಿದ್ದಳಂತೆ. ತಂತ್ರದಾಗಿನ ಒಂಭತ್ತನೇ ವಿಧ್ಯೆಯಂತೆ. ನಾನು ಹುಟ್ಟಿದ್ದೇ ತೃತೀಯ ಪ್ರಕೃತಿಯ ಲಿಂಗದಾಗ. ಅಂಗಂತ ನಮ್ಮ ಅಪ್ಪ ಅವ್ವ ನನಿಗೇನು ಕಡಿಮಿ ಮಾಡಿದ್ದಿಲ್ರೀ. ಆದ್ರ ಮನೀಯಿಂದ ಹೊರಗ ಕಳಸಾವಲ್ರು. ಅಂಗಾಗಿ ನಾನು ಓಳಗಾ ಅಭ್ಯಾಸ ಮಾಡಿಕೋತಾ ಕೂಂತಿರ್ತಿದ್ದಿನ್ರೀ. ಶಿವ ಅರ್ಧನಾರಿಯ ರೂಪದಾಗ ಪ್ರತ್ಯಕ್ಷಾಗಿ ನನ್ನೊಳಗೇ ಶಕ್ತಿನೂ ಅದಾಳ ಅಂತಾ ಇಡೀ ಜಗತ್ತಿಗೇ ಸಾರಿ ಹೇಳಿದ್ದು ಶಿವಪುರಾಣದಾಗೆ ಓದಿದಾಗ ನನಿಗೂ ಒಂತರಾ ಸಮಾಧಾನ. ಓಗ್ಲೀ ಬಿಡೂ ಶಿವನೇ ಆ ರೂಪದಾಗ ಇರ್ಬೇಕಾದ್ರೆ ನಂದೇನು ಅನ್ನುಸ್ತಿತ್ತು. ಏನು ಅಂದ್ರ ಅರ್ಧನಾರೀಶ್ವರನ ವಾಮಭಾಗದಾಗ ಶಕ್ತಿ ಅದಾಳ, ಶಿವ ಬಲಭಾಗದ ಅದಾನ. ಆದ್ರೇ ನನ್ನ ಪುರುಷ ದೇಹದ ಒಳಾಗ ಒಬ್ಬ ಹೆಣ್ಣು ಅದಾಳ ಅನ್ನದೇ ನನಗೂ ಆ ಅರ್ಧ ನಾರೀಶ್ವರನಿಗಿರ ವ್ಯತ್ಯಾಸ. ಹಂಪಿಯ ದಸರಾ ಅಂದ್ರ ಕೇಳಬೇಕೆನ್ರಿ. ಆ ಒಂಬಂತ್ತು ದಿವಸ ನನಿಗೆ ಹೊರಗೇ ಇರೋ ಆಸೆ. ಅದಕ್ಕಂತೂ ನಮ್ಮಪ್ಪ ಜಾಸ್ತಿ ಅಡ್ಡೀ ಮಾಡ್ತಿರ್ಲಿಲ್ಲಾ. ನನ್ನಂಗೇ ಇರೋ ಮಂದಿಗಳ ಜೊ...

ರಾಯಚೂರಿನಲ್ಲಿ ರಾಯರ ಶೌರ್ಯ

Image
'ನೀನು ಅಪ್ಪಿತಪ್ಪಿ ಪುರೋಹಿತರ ವಂಶದಲ್ಲಿ ಹುಟ್ಟಿದೀಯಾ...' ಹಾಗಂತಾ ನಮ್ಮ ಅಜ್ಜಿ ನನಗೆ ಚಿಕ್ಕಂದಿನಲ್ಲಿ ಗದರಿಸುತ್ತಿದ್ದಾಗ ನನಗೇನು ಬೇಜಾರಾಗುತ್ತಿರಲಿಲ್ಲ. ಅವರ ಗದರಿಕೆಯಲ್ಲೂ ಒಂದಿಷ್ಟು ಕೋಪ ಮತ್ತೊಂದಿಷ್ಟು ಹೆಮ್ಮೆ ಇರುತ್ತಿತ್ತು.  ಕೋಪ ಯಾಕೆಂದ್ರೆ ಅವರಿಗೆ ಕೇಳಬೇಕೆನಿಸಿದ ವಿಷ್ಣುಪುರಾಣವನ್ನು ಓದುವುದನ್ನು ಬಿಟ್ಟು ಯುದ್ಧಗಳ, ಸಾಹಸದ ಕಥೆಗಳನ್ನು ಹೇಳುತ್ತಿದ್ದೆ. ಯುಧ್ಧ ಕೌಶಲ್ಯಗಳ ಬಗ್ಗೆ ನನಗೆ ಗೊತ್ತಿದ್ದ ಜ್ಞಾನದ ಬಗ್ಗೆ ಅಜ್ಜಿಗೆ ಮೆಚ್ಚುಗೆಯಂತೂ ಇತ್ತು. ಹಂಪೆಯಲ್ಲಿ ಪೌರೋಹಿತ್ಯಕ್ಕೆ ಹೆಸರುವಾಸಿಯಾದ ಕೃಷ್ಣಾಶಾಸ್ತ್ರಿಯ ಮಗ ಅನಂತಶಾಸ್ತ್ರಿಯಾದ ನನಗೆ ಅದೇಕೋ ಏನೋ ಯುದ್ದದ ಕತೆಗಳು ಅಂದರೆ ಬಲು ಇಷ್ಟ. ರಾಮಾಯಣ, ಮಹಾಭಾರತಗಳಲ್ಲಿ ಬರುವ ಯುದ್ಧ ಪ್ರಸಂಗಗಳನ್ನು ಪದೇ ಪದೇ ಓದಿ ಬಾಯಿಪಾಠ ವಾಗಿಬಿಟ್ಟಿತ್ತು. ಅದನ್ನು ಅಷ್ಟೇ ಆಸಕ್ತಿಯಿಂದ ಕೇಳಿಸಿಕೊಳ್ಳುವ ಗೆಳೆಯರ ಗುಂಪುಗಳು ಅದಕ್ಕೇ ಕಾಯುತ್ತಿದ್ದವು.            ಕೃಷ್ಣದೇವರಾಯರ ಕಾಲದಲ್ಲಿ ಹಂಪೆಯಲ್ಲಿ ಹುಟ್ಟಿಬೆಳೆದವನಿಗೆ ಸಾಹಸ, ಶೌರ್ಯಗಳ ಪ್ರಸಂಗಗಳಿಗೇನು ಕೊರತೆಯೇ? ಅಂತಹ ವೀರಾಧಿವೀರ ರಾಯರನ್ನು ನೋಡುವುದೇ ಒಂದು ಸೌಭಾಗ್ಯ. ಅವರ ಪಟ್ಟಾಭಿಷೇಕವಾದಾಗ ನನಗಿನ್ನೂ ಹದಿನಾಲ್ಕು ವರ್ಷ. ಅವರು ಬಹಮನಿಯ ಸುಲ್ತಾನರನ್ನು ರಾಯಚೂರಿನಿಂದ ಹೊಡೆದೋಡಿಸಿದ್ದು, ಉಮ್ಮತ್ತೂರಿನ ಗಂಗರಾಜನ ದಂಗೆಯಡಗಿಸಿದ್ದು, ಕಳಿಂಗರಾಜ ಪ್ರತಾಪ ರುದ್ರನ...

ಚಿಕ್ಕರಾಯರಿಗಾಗಿ ಚಂಡಿಕಾ ಹೋಮ

Image
               ರಾಜಪರಿವಾರ ಕೊಲ್ಲೂರಿಗೆ ತಲುಪಿ ವಿಶ್ರಾಂತಿ ಪಡೆಯುತ್ತಿದ್ದಾರೆ, ವ್ಯಾಸತೀರ್ಥರು ಮರುದಿನ ನಡೆಯಲಿರುವ ಚಂಡಿಕಾ ಹೋಮದ ಸಿಧ್ಧತೆಗಳನ್ನು ಪರಿಶೀಲಿಸಲು ಮುಖ್ಯ ಪುರೋಹಿತರ ಜೊತೆ ಮೂಕಾಂಬಿಕ ದೇವಸ್ಥಾನದ ಆವರಣದಲ್ಲಿದ್ದಾರೆ ಎಂದು ತಿಳಿದಕೂಡಲೇ ನಾನು ಮುಳುಬಾಗಿಲಿನ ಶ್ರೀಮಠದ ಶಿಷ್ಯರೊಂದಿಗೆ ನನ್ನ ತಮ್ಮ ವ್ಯಾಸರಾಜರನ್ನು ಕಾಣಲು ಹೊರಟೆ.  ಮಠದ ಶಿಷ್ಯರಿಗೆ ಅವರು ಸರಳೀಕರಿಸಿದ ವ್ಯಾಸರಾಜರ 'ನ್ಯಾಯಾಮೃತ' ಮತ್ತಿತರ ಗ್ರಂಥಗಳ ಬಗ್ಗೆ ಚರ್ಚಿಸಲು ಇದೇ ಸೂಕ್ತ ಸಮಯ.  ಅವರಿನ್ನೂ ಪುರೋಹಿತರ ಜೊತೆ ಮಾತನಾಡುತ್ತಿದ್ದದರಿಂದ ನಾವು ಸ್ವಲ್ಪ ದೂರದಲ್ಲಿ ಕುಳಿತುಕೊಂಡೆವು.   ವಿಷಯ, ಲಘು ಚಂಡಿಕಾ ಹೋಮ ಮಾಡುವುದೋ ಅಥವಾ ಪೂರ್ಣ ಚಂಡಿಕಾ ಹೋಮ ಮಾಡುವುದೋ ಎಂಬುದರ ಬಗ್ಗೆ ನಡೆಯುತ್ತಿತ್ತು.    ಲಘು ಚಂಡಿಕಾ ಎಂದರೆ ಪಾರ್ವತಿ, ಲಕ್ಷ್ಮಿ ಮತ್ತು ಸರಸ್ವತಿಯರ ಆವಾಹನೆ. ಪೂರ್ಣ ಚಂಡಿಕಾ ಎಂದರೆ ಪೂರ್ಣರೂಪ, ಹದಿನಾರು ಕೈಗಳ ಶಕ್ತಿ ಸ್ವರೂಪಿಣಿಯ ಆವಾಹನೆ. ಬಹು ಸುಧೀರ್ಘವಾದ ಪ್ರಕ್ರಿಯೆ, ಒಮ್ಮೆ ಶುರು ಮಾಡಿದರೆ ಮಧ್ಯ ನಿಲ್ಲಿಸುವ ಹಾಗಿಲ್ಲ. ವ್ಯಾಸರಾಜರು ಸ್ವಲ್ಪ ಹೊತ್ತು ಯೋಚನೆಯಲ್ಲಿ ಮುಳುಗಿದರು. ಯಾವುದೋ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಂತೆ ಕಾಣಿಸಿದರು.  ಅವರ ಆಲೋಚನೆಗಳಿಗೆ ಭಂಗ ಬರದಂತೆ ಇತರರೂ ಮೌನವಹಿಸಿದರು. ಕೊನೆಗೆ ವ್ಯಾಸರಾಜರು ಮೌನವನ್ನ...