ರಣಕಹಳೆ ಕೂಗೀತೇ?
ಈಗಾಗಲೇ ಒಂದು ತಿಂಗಳಾಯಿತು ರಾಯಚೂರಿನ ಕೋಟೆಗೆ ಮುತ್ತಿಗೆ ಹಾಕಿ. ಕೋಟೆಯೊಳಗಿರುವ ಸುಲ್ತಾನರ ಸೈನಿಕರು ಮಣಿಯುವಂತೆ ಕಾಣುತ್ತಿಲ್ಲವಂತೆ. ವಿಜಯನಗರದ ಸೈನ್ಯಕ್ಕೆ ಕೋಟೆ ಬಾಗಿಲನ್ನು ಒಡೆದು ಒಳನುಗ್ಗುವುದೇನು ದೊಡ್ಡಮಾತಲ್ಲ, .ಆದರೆ ಹಾಗೆ ಮಾಡಬೇಡಿ ಎಂಬ ಸಲಹೆಯನ್ನು ಕೊಟ್ಟರಂತೆ, ಮಾಜಿ ಸೈನ್ಯಾಧಿಕಾರಿಗಳು ಮತ್ತು ಸೈನಿಕರು. ವಿಜಯನಗರದ ಸೈನ್ಯದಲ್ಲಿ ಇನ್ನೂರಕ್ಕೂ ಹೆಚ್ಚು ಮಾಜಿ ಸೈನಿಕರ ತಂಡವೂ ಬಂದಿದೆ. ಹಿಂದಿನ ಯುಧ್ಧಗಳಲ್ಲಿ ಭಾಗವಹಿಸಿದ ಅವರ ಅನುಭವಗಳನ್ನು ಹೇಳುತ್ತಾರೆ ಮತ್ತು ಸಲಹೆ ಕೊಡುತ್ತಿರುತ್ತಾರೆ. ಸುಲ್ತಾನರ ಸೈನಿಕರು ಎಷ್ಟು ಕ್ರೂರಿ ಹಾಗು ನಿರ್ದಯಿಗಳು ಎನ್ನುವುದರ ಬಗ್ಗೆ ಇವರಿಗೆ ಚೆನ್ನಾಗಿ ಪರಿಚಯವಿತ್ತು. ' ನೀವು ಕೋಟೆ ಬಾಗಿಲನ್ನು ಒಡೆದು ಒಳಹೊಕ್ಕರೆ ಅಲ್ಲಿ ಮಕ್ಕಳು ಮತ್ತು ಹೆಣ್ಣು ಮಕ್ಕಳನ್ನು ಸಾಲಾಗಿ ನಿಲ್ಲಿಸಿರುತ್ತಾರೆ. ನೀವು ಯಾವಾಗ ಹಿಮ್ಮೆಟ್ಟುತ್ತೀರೋ ಆಗ ಹಠಾತ್ತನೆ ನಿಮ್ಮ ಮೇಲೆ ಆಕ್ರಮಣ ಮಾಡುತ್ತಾರೆ...ಅಂತಹ ಹೇಡಿಗಳು ಇವರು' ಈ ಸಲಹೆಗೆ ಕೃಷ್ಣದೇವರಾಯರೂ ಮಣಿಯಲೇ ಬೇಕಾಯಿತು. ಈ ದಿಗ್ಬಂಧನೆಗೆ ಇವತ್ತಲ್ಲಾ ನಾಳೆ ಮಣಿದೇ ಮಣಿಯಯುತ್ತಾರೆ ಆದರೆ ಅಸಹಾಯಕರ ಬಲಿ ತೆಗೆದುಕೊಂಡು ಕೋಟೆಯನ್ನು ವಶಪಡಿಸಿಕೊಡಿಸಿಕೊಳ್ಳುವುದು ಧರ್ಮವಲ್ಲ ಎಂದರು. ಹಲವಾರು ದಿನಗಳ ನಂತರ ನಮ್ಮ ಓಂಕಾರಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದವನೇ ಸೀದಾ ನಾಯಕರುಗಳ ಢೇರೆಯೊಳಕ್ಕೆ ನುಗ್ಗಿ ಹೋದನೆಂದರೆ, ಏನೋ ಬೇಹುಗಾರಿಕೆ...